ಶೃಂಗೇರಿ ಜಗದ್ಗುರುಗಳವರ ವಿಜಯಯಾತ್ರಾ ವೈಭವ 1

hhh

Cover artwork for ಶೃಂಗೇರಿ ಜಗದ್ಗುರುಗಳವರ ವಿಜಯಯಾತ್ರಾ ವೈಭವ 1
SHORT STORIES

ಮೈಸೂರ ಅರಮನೆಯಲ್ಲಿ ಶೃಂಗೇರಿ ಜಗದ್ಗುರುಗಳ ಶಿಷ್ಯ-ಸ್ವೀಕಾರ ಮಹೋತ್ಸವ

ಮೈಸೂರಿನ ಅರಮನೆ ಆವರಣದಲ್ಲಿರುವ ಶ್ರೀಲಕ್ಷ್ಮೀವೆಂಕಟರಮಣಸ್ವಾಮೀ ದೇವಸ್ಥಾನದಲ್ಲಿ ಕ್ರಿ.ಶ.1868 ನೆಯ ಇಸವಿಯಲ್ಲಿ (ಶಾಲಿವಾಹನ ಶಕ ವರ್ಷ 1789)ಆಷಾಡ ಬಹುಳ ಷಷ್ಠಿಯ ದಿನ ಜಗದ್ಗುರು ಶ್ರೀವೃದ್ಧನೃಸಿಂಹಭಾರತೀ ಮಹಾಸ್ವಾಮಿಗಳು ತಮ್ಮ ಉತ್ತರಾಧಿಕಾರಿ ಶಿಷ್ಯರಾಗಿ ಬ್ರಹ್ಮಚಾರಿ ಶ್ರೀಶಿವಸ್ವಾಮಿಗಳಿಗೆ ಸನ್ಯಾಸತ್ವನೀಡಿ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು.ಜಗದ್ಗುರು ಶ್ರೀ ನೃಸಿಂಹಭಾರತೀಗಳಿಗೆ ತಮ್ಮ ಗುರುಗಳಾದ ಸಚ್ಚಿದಾನಂದಭಾರತೀಗಳ ಸ್ಮರಣೆಯಾಗುವಂತಹ ಯೋಗಪಟ್ಟ ನೀಡಬೇಕೆನ್ನುವ ಅಭಿಲಾಷೆ,ಮಹಾರಾಜ ಮುಮ್ಮಡಿ ಕೃಷ್ಣರಾಜರಿಗೆ ತಮ್ಮ ಗುರುಗಳಾದ ಶ್ರೀನೃಸಿಂಹಭಾರತಿಗಳ ನಾಮಸ್ಮರಣೆಯಾಗುವಂತಹ ದೀಕ್ಷಾನಾಮವಿರಬೇಕಂಬ ಅಪೇಕ್ಷೆಯೊಂದಿಗೆ ಬಾಲ ಯತಿಗಳ ಪೂರ್ವಾಶ್ರಮ & ಜನ್ಮ ವೃತ್ತಾಂತದಲ್ಲಿ ಈಶ್ವರ ಪ್ರೇರಣೆ ಇರುವುದರಿಂದ ಶಿವ ಶಬ್ದಕ್ಕೂ ಸ್ಥಾನ ನೀಡಿ ಸರ್ವ ಮಾನ್ಯವಾದ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಎಂಬ ಯೋಗಪಟ್ಟವನ್ನು ಜಗದ್ಗುರು ಶ್ರೀ ವೃದ್ಧನೃಸಿಂಹ ಭಾರತೀ ಮಹಾಸ್ವಾಮಿಗಳು ಶಿಷ್ಯರಿಗೆ ಅನುಗ್ರಹಮಾಡಿದರು.

9 ರ ಪ್ರಾಯದ ಬಾಲಯತಿಗಳು ಬೆಳಗಿನಜಾವದಿಂದ ಸಂಜೆಯವರೆಗೆ ನಿರಂತರವಾಗಿ ಸಾಗಿದ ಸನ್ಯಾಸ ದೀಕ್ಷಾ ಕಾರ್ಯಕ್ರಮಗಳಿಂದ ಆಯಾಸವಾಗಿ ಬಳಲಿದ್ದನ್ನು ಮನಗಂಡ ಶ್ರೀ ನೃಸಿಂಹಭಾರತೀ ಮಹಾಸ್ವಾಮಿಗಳು ತಮ್ಮ ಸಮೀಪದಲ್ಲಿಯೇ ಕೃಷ್ಣಾಜಿನ ಹಾಕಿಸಿ ಅದರ ಮೇಲೆ ಅವರನ್ನು ಮಲಗಿಸಿ,ತಾವು ಎಂದಿನಂತೆ ತಮ್ಮ ಆಹ್ನೀಕ,ಧ್ಯಾನ,ಚಂದ್ರಮೌಳೀಶ್ವರ ಪೂಜೆಯಲ್ಲಿ ಮಗ್ನರಾದರು.ಗಾಢನಿದ್ರೆಯಲ್ಲಿದ್ದ ಬಾಲಗುರುಗಳು ಸ್ಪಷ್ಟವಾಗಿ "ಸರ್ವೋಹಂ-ಸರ್ವೋಹಂ-ಸರ್ವೋಹಂ" ಎಂದು ಉಚ್ಚರಿಸಿದರು,ನಿದ್ರೆ ಮುಂದುವರಿದಿತ್ತು. ಈ ನುಡಿಗಳು ವೇದಾಂತದಲ್ಲಿ ಸಿದ್ಧಿ ಪಡೆದ ಅಪರಿಮಿತ ಸಾಧನೆಗೈದ ಜೀವನ್ಮುಕ್ತರ ಅನುಭೂತಿ ವಾಕ್ಯಗಳು.ಹತ್ತಿರದಲ್ಲಿದ್ದ ಮಹಾಸನ್ನಿಧಾನವರಿಗೂ ಮತ್ತು ಶಿಷ್ಯರಿಗೂ ಪರಮಾಶ್ಚರ್ಯವಾಯಿತು.ಗುರುಗಳ ಪ್ರಭೆಯನ್ನು ಕೊಂಡಾಡಿದರು.ಗುರುಗಳು ಸಂತೋಷದಿಂದ ಪ್ರಾರ್ಥಿಸಿದರೆ,ಭಕ್ತರು ಬಾಲಗುರುಗಳನ್ನು ವಂದಿಸಿದರು.

ಜಗದ್ಗುರು ಮಹಾಸ್ವಾಮಿಗಳ ಈ ವರ್ಷದ ವಿಜಯಯಾತ್ರೆಯ ಸುಸಂದರ್ಭದಲ್ಲಿ ಮೈಸೂರಿಗೆ ಚಿತ್ತೈಸಿದಾಗ ಚರಿತ್ರೆಯಿಂದ ಆಯ್ದ ಐತಿಹಾಸಿಕ ಘಟನೆಯೊಂದಿಗೆ ಗುರುಗಳನ್ನು ಸ್ಮರಣೆಗೈಯುತ್ತಾ..

ಶ್ರೀ ಭವಾನೀ ಸಮೇತಂ ಭಜೇ ಮಲಹಾನಿಕರೇಶ್ವರಂ


#ShortStories #UrbanFiction #Storytelling #FlashFiction
Next 2-Minute Read The Old Radio of Matunga East Read Next Story →
Read smoothly in WritOn
Open App